Google AI First Policy 2026 : Google ನಲ್ಲಿ ಏನಾಗ್ತಾ ಇದೆ?
“AI ಕಲಿಯಿರಿ… ಇಲ್ಲ ಕಂಪನಿ ತೊರೆಯಿರಿ!”
ಹೌದು, ಇಂತಹದ್ದೊಂದು ಸ್ಪಷ್ಟ ಸಂದೇಶ ಇದೀಗ Google ತನ್ನ ಉದ್ಯೋಗಿಗಳಿಗೆ ನೀಡಿದಂತಾಗಿದೆ.
ಟೆಕ್ ಲೋಕದಲ್ಲಿ ಈಗಾಗಲೇ AI ಹವಾ ಜೋರಾಗಿದೆ. ಆದರೆ ಈಗ ಅದು ಕೇವಲ ಟ್ರೆಂಡ್ ಅಲ್ಲ. ಇದು ಕಂಪನಿಗಳ ಜೀವಾಳವಾಗ್ತಾ ಇದೆ.
Google ಈಗ ಸ್ಪಷ್ಟವಾಗಿ AI First ಕಂಪನಿಯಾಗಿ ಮಾರ್ಪಡುತ್ತಾ ಇದೆ. ಅಂದರೆ ಕಂಪನಿಯ ಪ್ರತಿಯೊಂದು ವಿಭಾಗದಲ್ಲೂ AI ಮುಖ್ಯ ಪಾತ್ರ ವಹಿಸಬೇಕು ಎಂಬ ನಿರ್ಧಾರ.
ಈ ಹಿನ್ನೆಲೆಯಲ್ಲೇ ಹೊಸ Voluntary Exit Program ಘೋಷಣೆ ಬಂದಿದೆ.
🤖 AI First Policy ಅಂದ್ರೇನು ಅಯ್ಯಾ?
ಸರಳವಾಗಿ ಹೇಳ್ಬೇಕಂದ್ರೆ, Google ಈಗ ಎಲ್ಲ ಕೆಲಸಗಳಲ್ಲೂ AI ಬಳಸೋಕೆ ಮುಂದಾಗಿದೆ.
Search ಇರಲಿ, Ads ಇರಲಿ, Cloud ಇರಲಿ, Data ಇರಲಿ… ಎಲ್ಲ ಕಡೆ AI integration ನಡೆಯುತ್ತಿದೆ.
AI ಬಳಸದೆ ಮುಂದೆ ಹೋಗೋದು ಸಾಧ್ಯವೇ ಇಲ್ಲ ಅನ್ನೋ ಹಂತಕ್ಕೆ ಕಂಪನಿ ಬಂದಿದೆ.
ಹೀಗಾಗಿ ಕಂಪನಿ ಹೇಳ್ತಾ ಇದೆ –
• AI ಕಲಿಯಲು ಸಿದ್ಧರಾಗಿ
• ಹೊಸ ಕೌಶಲ್ಯ ಪಡೆದುಕೊಳ್ಳಿ
• ಇಲ್ಲದಿದ್ದರೆ ಸ್ವಯಂ ಪ್ರೇರಿತವಾಗಿ ಹೊರ ಹೋಗಿ
ಇದು ಕಡ್ಡಾಯ ಲೇಆಫ್ ಅಲ್ಲ. ಆದರೆ ಸ್ಪಷ್ಟ ಸಂದೇಶ ಹೌದು.
📦 Voluntary Exit Program ಅಂದ್ರೇನು?
ಈ ಹೊಸ ಯೋಜನೆಯನ್ನು Voluntary Exit Program ಅಂತ ಕರೀತಾರೆ.
ಇದು Forced Layoff ಅಲ್ಲ.
ಯಾರು AI ವೇಗಕ್ಕೆ ಹೊಂದಿಕೊಳ್ಳೋಕೆ ಕಷ್ಟಪಡ್ತಾರೆ, ಅವರಿಗೆ ಗೌರವಯುತವಾಗಿ ಹೊರ ಹೋಗೋ ಅವಕಾಶ.
ಉದ್ಯೋಗಿಗಳು ತಾವೇ ಆಯ್ಕೆ ಮಾಡಿಕೊಂಡು ಕಂಪನಿ ತೊರೆಯಬಹುದು. ಅದಕ್ಕೆ ಉತ್ತಮ ಪರಿಹಾರ ಧನ, ಸಿವರೆನ್ಸ್ ಪ್ಯಾಕೇಜ್ ಕೊಡಲಾಗುತ್ತದೆ.
ಈ ಯೋಜನೆ ಮುಖ್ಯವಾಗಿ Global Business Organization ವಿಭಾಗದವರಿಗೆ ಅನ್ವಯಿಸುತ್ತದೆ.
• Sales ತಂಡ
• Corporate Development
• Solutions ವಿಭಾಗ
ಆದ್ರೆ Customer facing roles ಗೆ ಕೆಲವೊಂದು ವಿನಾಯಿತಿ ಇದೆ.
📩 Philip Schindler ಏನು ಹೇಳಿದ್ದಾರೆ?
Google ನ Chief Business Officer Philip Schindler ಆಂತರಿಕ ಇಮೇಲ್ ಮೂಲಕ ಉದ್ಯೋಗಿಗಳಿಗೆ ಸ್ಪಷ್ಟ ಸಂದೇಶ ಕಳಿಸಿದ್ದಾರೆ.
ಅವರ ಮಾತು ಏನು ಅಂದ್ರೆ –
“ನಾವು ವೇಗವಾಗಿ ಬದಲಾಗ್ತಿರುವ ತಂತ್ರಜ್ಞಾನ ಯುಗದಲ್ಲಿದ್ದೇವೆ. ಪ್ರತಿಯೊಬ್ಬರೂ AI ಅಪ್ಪಿಕೊಳ್ಳಬೇಕು.”
ಯಾರು ಈ ಬದಲಾವಣೆಗೆ ಸಿದ್ಧರಿಲ್ಲವೋ ಅಥವಾ ಬೇರೆ ಅವಕಾಶ ಹುಡುಕ್ತಾ ಇದ್ದಾರೋ ಅವರಿಗೆ ಈ ಪ್ಯಾಕೇಜ್ ಸಹಾಯ ಮಾಡುತ್ತದೆ ಅಂತ ಹೇಳಿದ್ದಾರೆ.
ಅಂದರೆ ಕಂಪನಿ ಒತ್ತಾಯ ಮಾಡ್ತಾ ಇಲ್ಲ, ಆದರೆ ದಿಕ್ಕು ಸ್ಪಷ್ಟ ಮಾಡ್ತಾ ಇದೆ.
📊 Google ಹಣಕಾಸು ಸ್ಥಿತಿ ಹೇಗಿದೆ?
ಇಲ್ಲಿ ಮುಖ್ಯ ಪ್ರಶ್ನೆ – ಕಂಪನಿ ನಷ್ಟದಲ್ಲಿದೆಯಾ?
ಇಲ್ಲ.
Google ನ ಮಾತೃ ಸಂಸ್ಥೆ Alphabet Inc. ಕಳೆದ ತ್ರೈಮಾಸಿಕದಲ್ಲಿ 18% ಆದಾಯ ಏರಿಕೆ ಕಂಡಿದೆ.
34 ಬಿಲಿಯನ್ ಡಾಲರ್ ಗಿಂತ ಹೆಚ್ಚು ಲಾಭ ಗಳಿಸಿದೆ.
ಸತತ ಮೂರು ತ್ರೈಮಾಸಿಕಗಳಲ್ಲಿ 10% ಗಿಂತ ಹೆಚ್ಚು ಬೆಳವಣಿಗೆ ದಾಖಲಿಸಿದೆ.
ಅಂದರೆ ಇದು ಹಣಕಾಸಿನ ಸಮಸ್ಯೆ ಅಲ್ಲ. ಇದು ತಂತ್ರಜ್ಞಾನ ಪರಿವರ್ತನೆ.
💰 AI ಗೆ ಲಕ್ಷ ಲಕ್ಷ ಕೋಟಿ ಹೂಡಿಕೆ :
2026ರೊಳಗೆ ಜಗತ್ತಿನ ಪ್ರಮುಖ ಟೆಕ್ ಕಂಪನಿಗಳು AI ಗಾಗಿ ಭಾರೀ ಹೂಡಿಕೆ ಮಾಡ್ತಾ ಇವೆ.
ಸುಮಾರು 58 ಲಕ್ಷ ಕೋಟಿ ರೂಪಾಯಿ ಹೂಡಿಕೆ ಅಂದಾಜು ಇದೆ.
Data Center, AI Chips, Cloud Infrastructure, Machine Learning Model development… ಇವೆಲ್ಲದರ ಮೇಲೆ ಭಾರೀ ವೆಚ್ಚ ಮಾಡಲಾಗುತ್ತಿದೆ.
AI ಈಗ ಭವಿಷ್ಯದ ಆರ್ಥಿಕ ಎಂಜಿನ್ ಆಗಿದೆ.
🌍 ಇತರೆ ಕಂಪನಿಗಳು ಕೂಡ ಇದೇ ದಾರಿ :
Google ಮಾತ್ರವಲ್ಲ.
• Microsoft
• Amazon
• Meta Platforms
ಈ ಎಲ್ಲಾ ಕಂಪನಿಗಳೂ AI First ನೀತಿ ಅನುಸರಿಸುತ್ತಿವೆ.
AI ತಿಳಿದವರಿಗೆ ಮಾತ್ರ ಭವಿಷ್ಯದಲ್ಲಿ ಹೆಚ್ಚಿನ ಅವಕಾಶ ಅನ್ನೋದು ಸ್ಪಷ್ಟವಾಗ್ತಾ ಇದೆ.
📚 AI ಕಲಿಯದವರು ನಿಜವಾಗಿಯೂ ಅಪಾಯದಲ್ಲಿದಾರಾ?
ಇಲ್ಲಿ ದೊಡ್ಡ ಪ್ರಶ್ನೆ ಏನು ಅಂದ್ರೆ, AI ಕಲಿಯದವರು ನಿಜವಾಗಿಯೂ ಕೆಲಸ ಕಳೆದುಕೊಳ್ಳ್ತಾರಾ?
ಸತ್ಯ ಹೇಳ್ಬೇಕಂದ್ರೆ, ಟೆಕ್ ಇಂಡಸ್ಟ್ರಿಯಲ್ಲಿ ಈಗಾಗಲೇ ಕೆಲಸದ ಸ್ವರೂಪ ಬದಲಾಗ್ತಾ ಇದೆ.
ಹಿಂದೆ manual ಆಗಿ ಮಾಡುತ್ತಿದ್ದ ಅನೇಕ ಕೆಲಸಗಳನ್ನು ಈಗ automation ಮತ್ತು AI tools ಮಾಡ್ತಾಿವೆ. Data analysis ಇರಲಿ, customer support ಇರಲಿ, marketing optimization ಇರಲಿ… ಎಲ್ಲ ಕಡೆ AI ಪ್ರವೇಶ ಮಾಡಿದೆ.
AI ಒಂದು ಕೆಲಸವನ್ನು ತೆಗೆದುಕೊಳ್ಳಲ್ಲ, ಆದರೆ AI ಬಳಸಬಲ್ಲ ವ್ಯಕ್ತಿ ನಿಮ್ಮ ಕೆಲಸವನ್ನು ತೆಗೆದುಕೊಳ್ಳಬಹುದು.
ಇದು ಈಗಾಗಲೇ ಜಗತ್ತಿನ ದೊಡ್ಡ ಕಂಪನಿಗಳಲ್ಲಿ ಕಾಣಿಸುತ್ತಿರುವ ಸತ್ಯ.
AI skill ಇರುವವರು –
• ವೇಗವಾಗಿ problem solve ಮಾಡುತ್ತಾರೆ
• ಕಡಿಮೆ ಸಮಯದಲ್ಲಿ ಹೆಚ್ಚು output ಕೊಡುತ್ತಾರೆ
• ಕಂಪನಿಗೆ ಹೆಚ್ಚು value create ಮಾಡುತ್ತಾರೆ
ಹೀಗಾಗಿ ಕಂಪನಿಗಳು ಕೂಡ naturally AI skilled workforce ಕಡೆ ತಿರುಗುತ್ತಿವೆ.
Google ತೆಗೆದುಕೊಂಡಿರುವ ಈ ನಿರ್ಧಾರ ಒಂದು signal.
ಇದು ಕೇವಲ internal policy ಅಲ್ಲ. ಇದು future job market direction.
2026ರ ನಂತರ recruitment ಪ್ರಕ್ರಿಯೆಯಲ್ಲೇ AI skill ಒಂದು primary requirement ಆಗಬಹುದು.
Coding ಮಾತ್ರವಲ್ಲ, non-technical ಕ್ಷೇತ್ರಗಳಲ್ಲೂ AI knowledge ಮುಖ್ಯವಾಗಲಿದೆ.
Marketing, HR, Finance, Sales… ಎಲ್ಲ ಕ್ಷೇತ್ರಗಳಲ್ಲೂ AI tools ಬಳಕೆ ಹೆಚ್ಚಾಗುತ್ತಿದೆ.
AI literacy ಈಗ basic computer knowledge ಹಾಗೆ ಅನಿವಾರ್ಯವಾಗುತ್ತಿದೆ
ಹೀಗಾಗಿ ಉದ್ಯೋಗಿಗಳು ಮಾಡಬೇಕಾದದ್ದು ಸ್ಪಷ್ಟ –
• Online AI courses ಕಲಿಯಿರಿ
• Practical tools ಬಳಸಿ practice ಮಾಡಿ
• Automation ಬಗ್ಗೆ ಅರಿವು ಪಡೆದುಕೊಳ್ಳಿ
• ಹೊಸ ತಂತ್ರಜ್ಞಾನಕ್ಕೆ open mind ಇರಲಿ
ಯಾರು “ನನ್ನ ಕೆಲಸಕ್ಕೆ AI ಬೇಡ” ಅಂತಕೊಂಡು ಕೂತ್ಕೊಳ್ತಾರೋ, ಅವರಿಗೇ ಭವಿಷ್ಯದಲ್ಲಿ ಹೆಚ್ಚು ಸವಾಲು ಎದುರಾಗಬಹುದು.
Google ಈ ಹೆಜ್ಜೆ ಮೂಲಕ ಹೇಳ್ತಾಿರುವುದು ಒಂದೇ –
“ಬದಲಾವಣೆ ತಪ್ಪಿಸಲು ಆಗೋದಿಲ್ಲ. ಅದಕ್ಕೆ ಹೊಂದಿಕೊಳ್ಳಲೇಬೇಕು.”
👨💻 ಉದ್ಯೋಗಿಗಳಿಗೆ ಇದರಿಂದ ಏನು ಅರ್ಥ?
ಸತ್ಯ ಹೇಳ್ಬೇಕಂದ್ರೆ ಇದು ಒಂದು ಎಚ್ಚರಿಕೆಯ ಗಂಟೆ.
AI ಕೌಶಲ್ಯ ಇನ್ನು ಐಚ್ಛಿಕವಲ್ಲ, ಅವಶ್ಯಕ.
ಮುಂದಿನ ಉದ್ಯೋಗ ಮಾರುಕಟ್ಟೆಯಲ್ಲಿ –
• Automation ಹೆಚ್ಚಾಗುತ್ತದೆ
• ಹಳೆಯ ಕೆಲಸಗಳು ಕಡಿಮೆಯಾಗಬಹುದು
• ಹೊಸ AI ಆಧಾರಿತ ಉದ್ಯೋಗಗಳು ಬರುತ್ತವೆ
• Skill based salary ಹೆಚ್ಚಾಗಬಹುದು
ಯಾರು ನಿರಂತರವಾಗಿ ಕಲಿಯುತ್ತಾರೋ ಅವರು ಉಳಿಯುತ್ತಾರೆ.
🔍 ಇದು ಒತ್ತಡನಾ? ಅವಕಾಶನಾ?
ಎರಡೂ ಇದೆ.
ಒಂದೆಡೆ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನ ಕಲಿಯುವ ಒತ್ತಡ ಇದೆ.
ಇನ್ನೊಂದೆಡೆ ಉತ್ತಮ ಪರಿಹಾರ ಧನದೊಂದಿಗೆ ಹೊರ ಹೋಗುವ ಅವಕಾಶ ಇದೆ.
AI ಕಲಿಯಲು ಸಿದ್ಧರಿದ್ದವರಿಗೆ ಇದು ದೊಡ್ಡ ಅವಕಾಶ.
ಹೊಂದಿಕೊಳ್ಳದವರಿಗೆ ಇದು ತಿರುವುಬಿಂದು.
🏁 ಕೊನೆ ಮಾತು :
Google AI First Policy ಸ್ಪಷ್ಟ ಸಂದೇಶ ಕೊಡ್ತಾ ಇದೆ.
ಭವಿಷ್ಯ AI ಆಧಾರಿತ.
AI ಕಲಿತವರು ಮುಂದಿನ ದಶಕದಲ್ಲಿ ಮುಂಚೂಣಿಯಲ್ಲಿರುತ್ತಾರೆ.
“AI ಗೊತ್ತಿಲ್ಲ ಅಂದ್ರೆ ಕೆಲಸಕ್ಕೆ ಗುಡ್ ಬೈ ಹೇಳ್ಬೇಕಾಗಬಹುದು” ಅನ್ನೋ ಸೂಚನೆ ಈಗ ಸ್ಪಷ್ಟವಾಗಿದೆ.
ಟೆಕ್ ಲೋಕದಲ್ಲಿ ಉಳಿಯಬೇಕಾದರೆ ಕಲಿಯಲೇಬೇಕು.
ಇದು ಕೇವಲ Google ವಿಷಯ ಅಲ್ಲ.
ಇದು ಭವಿಷ್ಯದ ಉದ್ಯೋಗ ಮಾರುಕಟ್ಟೆಯ ನಿಜ ಚಿತ್ರ.