WhatsApp Join My WhatsApp

SSB Recruitment 2026: ಕಾನ್ಸ್ಟೇಬಲ್ & ಹೆಡ್ ಕಾನ್ಸ್ಟೇಬಲ್ 1060+ ಹುದ್ದೆಗಳು – Apply Now

SSB Recruitment 2026: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಬಂದಿದೆ.
2026ರಲ್ಲಿ ಸಶಸ್ತ್ರ ಸೀಮಾ ಬಲ (SSB) ವತಿಯಿಂದ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಹಾಗೂ ಡ್ರೈವರ್ ಹುದ್ದೆಗಳಿಗಾಗಿ ದೊಡ್ಡ ಮಟ್ಟದ ನೇಮಕಾತಿ ಪ್ರಕಟವಾಗಿದೆ.

ಒಟ್ಟು 1060ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಇದು ದೊಡ್ಡ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ 827 ಕಾನ್ಸ್ಟೇಬಲ್/ಡ್ರೈವರ್ ಹುದ್ದೆಗಳು ಹಾಗೂ 233 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಒಳಗೊಂಡಿವೆ.

ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿಯ ಪ್ರಾರಂಭ ದಿನಾಂಕ: 21 ಮಾರ್ಚ್ 2026
ಅರ್ಜಿಯ ಕೊನೆಯ ದಿನಾಂಕ: 19 ಏಪ್ರಿಲ್ 2026

ಈ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಖಾಲಿ ಹುದ್ದೆಗಳ ವಿವರ

🔹 ಕಾನ್ಸ್ಟೇಬಲ್ & ಡ್ರೈವರ್ ಹುದ್ದೆಗಳು – 827 ಪೋಸ್ಟ್

ಈ ವಿಭಾಗದಲ್ಲಿ ವಿವಿಧ ಹುದ್ದೆಗಳು ಸೇರಿವೆ:

  • ಕಾನ್ಸ್ಟೇಬಲ್ (ಡ್ರೈವರ್)
  • ಪಶುವೈದ್ಯಕೀಯ ಕಾನ್ಸ್ಟೇಬಲ್
  • ವಾಷರ್‌ಮ್ಯಾನ್
  • ಟೈಲರ್
  • ಕಾರ್ಪೆಂಟರ್
  • ನರ್ಸಿಂಗ್ ಸಹಾಯಕ

ಅತ್ಯಧಿಕವಾಗಿ ಡ್ರೈವರ್ ಹುದ್ದೆಗಳು – 553 ಪೋಸ್ಟ್ ಖಾಲಿ ಇವೆ.

ವರ್ಗವಾರು ಹಂಚಿಕೆ:

  • UR – 383
  • EWS – 64
  • OBC – 191
  • SC – 128
  • ST – 61

🔹 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು – 233 ಪೋಸ್ಟ್

ಈ ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಲಭ್ಯ:

  • ಸ್ಟೀವರ್ಡ್
  • ವೆಟರಿನರಿ
  • ಇತರೆ ತಾಂತ್ರಿಕ ವಿಭಾಗಗಳು

ವರ್ಗವಾರು ಹಂಚಿಕೆ:

  • UR – 105
  • EWS – 20
  • OBC – 62
  • SC – 27
  • ST – 19

ಶೈಕ್ಷಣಿಕ ಅರ್ಹತೆ

ಈ ನೇಮಕಾತಿಗೆ SSLC ಇಂದ PUC ಹಾಗೂ ITI/Diploma ವರೆಗೆ ಓದಿದವರಿಗೆ ಅವಕಾಶ ಇದೆ.

ಅರ್ಹತೆ:

  • SSLC (10th)
  • PUC (12th)
  • ITI
  • Diploma

ಹುದ್ದೆ ಅನುಸಾರ ಅರ್ಹತೆ ಬದಲಾಗಬಹುದು, ಆದ್ದರಿಂದ ನೋಟಿಫಿಕೇಶನ್ ಪರಿಶೀಲಿಸುವುದು ಮುಖ್ಯ.

ಡ್ರೈವರ್ ಹುದ್ದೆಗೆ ವಿಶೇಷ ಅರ್ಹತೆ

ಡ್ರೈವರ್ ಹುದ್ದೆಗೆ ಅರ್ಜಿ ಹಾಕುವವರು ಕಡ್ಡಾಯವಾಗಿ Heavy Driving License ಹೊಂದಿರಬೇಕು.

  • 4-ವೀಲ್ ವಾಹನ ಚಾಲನಾ ಪರವಾನಗಿ ಅಗತ್ಯ
  • ಅನುಭವ ಇದ್ದರೆ ಹೆಚ್ಚಿನ ಲಾಭ

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 27 ವರ್ಷ

ವಯೋಮಿತಿಯಲ್ಲಿ ಸಡಿಲಿಕೆ:

  • OBC: 3 ವರ್ಷ
  • SC/ST: 5 ವರ್ಷ

ವೇತನ ವಿವರ

🔸 ಕಾನ್ಸ್ಟೇಬಲ್

₹21,700 ರಿಂದ ₹69,100 ವರೆಗೆ ಸಂಬಳ ನೀಡಲಾಗುತ್ತದೆ.

🔸 ಹೆಡ್ ಕಾನ್ಸ್ಟೇಬಲ್

₹25,500 ರಿಂದ ₹81,100 ವರೆಗೆ ವೇತನ ಲಭ್ಯ.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳು: ₹100
  • SC/ST/ಮಹಿಳೆ/Ex-Servicemen: ಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಯಲ್ಲಿ ಹಲವು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ದೈಹಿಕ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ (ಓಟ, ಎತ್ತರ, ಎದೆ ಅಳತೆ)
  • ಕೌಶಲ್ಯ ಪರೀಕ್ಷೆ (ಡ್ರೈವರ್ ಹುದ್ದೆಗೆ ಮಾತ್ರ)
  • ದಾಖಲೆ ಪರಿಶೀಲನೆ

ಆಯ್ಕೆ ಪ್ರಕ್ರಿಯೆ ಬಗ್ಗೆ ಮುಖ್ಯ ಮಾಹಿತಿ

ಈ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುತ್ತದೆ ಮತ್ತು ಪ್ರತಿಯೊಂದು ಹಂತವೂ ಬಹಳ ಮುಖ್ಯವಾಗಿರುತ್ತದೆ.
ಮೊದಲಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತಗಳಿಗೆ ಅರ್ಹರಾಗುತ್ತಾರೆ.

ಅದಾದ ನಂತರ ದೈಹಿಕ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ.
ಇಲ್ಲಿ ಅಭ್ಯರ್ಥಿಗಳ ಎತ್ತರ, ತೂಕ, ಎದೆ ಅಳತೆ ಹಾಗೂ ಓಟದ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.

ಡ್ರೈವರ್ ಹುದ್ದೆಗೆ ಅರ್ಜಿ ಹಾಕಿರುವವರಿಗೆ ವಿಶೇಷವಾಗಿ ಕೌಶಲ್ಯ ಪರೀಕ್ಷೆ (Driving Test) ಇರುತ್ತದೆ.
ಇದು ಅವರ ವಾಹನ ಚಾಲನಾ ಸಾಮರ್ಥ್ಯವನ್ನು ಪರಿಶೀಲಿಸಲು ಮಾಡಲಾಗುತ್ತದೆ.

ಕೊನೆಯ ಹಂತದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
ಈ ಹಂತದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಸರಿಯಾದರೆ ಮಾತ್ರ ಆಯ್ಕೆ ಮಾಡಲಾಗುತ್ತದೆ.

ಪ್ರತಿಯೊಂದು ಹಂತದಲ್ಲೂ ಯಶಸ್ವಿಯಾಗಿ ಪಾಸ್ ಆದರೆ ಮಾತ್ರ ಅಂತಿಮವಾಗಿ ಉದ್ಯೋಗ ಸಿಗುತ್ತದೆ.
ಆದ್ದರಿಂದ ಎಲ್ಲ ಹಂತಗಳಿಗೂ ಸಮಾನವಾಗಿ ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಪರೀಕ್ಷೆಗಾಗಿ ತಯಾರಿ ಹೇಗೆ ಮಾಡಬೇಕು

ಈ ಉದ್ಯೋಗ ಪಡೆಯಲು ಸರಿಯಾದ ತಯಾರಿ ತುಂಬಾ ಮುಖ್ಯ.
ಬಹಳ ಜನರಿಗೆ ಮಾಹಿತಿ ಇದ್ದರೂ, ಸರಿಯಾದ ರೀತಿಯಲ್ಲಿ ಓದಿಲ್ಲ ಅಂದ್ರೆ ಅವಕಾಶ ತಪ್ಪುತ್ತದೆ.

ಈ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳೋ ವಿಷಯಗಳು:

  • ಸಾಮಾನ್ಯ ಜ್ಞಾನ
  • ಗಣಿತ
  • ತಾರ್ಕಿಕ ಪ್ರಶ್ನೆಗಳು
  • ಭಾಷೆ (ಇಂಗ್ಲಿಷ್ ಅಥವಾ ಹಿಂದಿ)

ಈ ವಿಷಯಗಳಲ್ಲಿ ನಿಮ್ಮ ಮೂಲ ಜ್ಞಾನ ಬಲವಾಗಿರಬೇಕು.

ತಯಾರಿ ಮಾಡುವ ವಿಧಾನ

  • ಪ್ರತಿ ದಿನ ಕನಿಷ್ಠ 4-5 ಗಂಟೆ ಓದಿ
  • ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ನೋಡಿ
  • ಸಮಯ ನೋಡಿಕೊಂಡು ಪರೀಕ್ಷೆ ಬರೆಯುವ ಅಭ್ಯಾಸ ಮಾಡಿ
  • ದಿನವೂ ಒಂದು ಗುರಿ ಇಟ್ಟು ಓದಿ

ನೀವು ನಿಯಮಿತವಾಗಿ ಓದಿದ್ರೆ ಪರೀಕ್ಷೆ ಸುಲಭ ಆಗುತ್ತದೆ.

ದೈಹಿಕ ಪರೀಕ್ಷೆ ತಯಾರಿ

ಬರೆಯುವ ಪರೀಕ್ಷೆ ಪಾಸ್ ಆದ್ರೇ ಸಾಕಾಗಲ್ಲ, ದೈಹಿಕ ಪರೀಕ್ಷೆಯೂ ಮುಖ್ಯ.

ಗಮನ ಕೊಡಬೇಕಾದವು:

  • ಪ್ರತಿದಿನ ಓಟ ಅಭ್ಯಾಸ ಮಾಡಿ
  • ದೇಹದ ಶಕ್ತಿ ಹೆಚ್ಚಿಸಿಕೊಳ್ಳಿ
  • ಒಳ್ಳೆಯ ಆಹಾರ ತಿನ್ನಿ
  • ಸರಿಯಾದ ನಿದ್ರೆ ಮಾಡಿಕೊಳ್ಳಿ

ಓಟದ ಅಭ್ಯಾಸ ಇಲ್ಲದಿದ್ದರೆ ಪರೀಕ್ಷೆಯಲ್ಲಿ ಕಷ್ಟವಾಗುತ್ತದೆ.

ಸಾಮಾನ್ಯ ತಪ್ಪುಗಳು

ಕೆಲವರು ಮಾಡುವ ತಪ್ಪುಗಳು:

  • ಕೊನೆಯ ದಿನ ಅರ್ಜಿ ಹಾಕುವುದು
  • ತಪ್ಪು ಮಾಹಿತಿ ಕೊಡುವುದು
  • ದಾಖಲೆ ಸರಿಯಾಗಿ ಅಪ್ಲೋಡ್ ಮಾಡದೇ ಇರುವುದು
  • ಓದನ್ನು ಲಘುವಾಗಿ ತೆಗೆದುಕೊಳ್ಳುವುದು

ಈ ತಪ್ಪುಗಳನ್ನು ತಪ್ಪಿಸಿದ್ರೆ ನಿಮ್ಮ ಅವಕಾಶ ಹೆಚ್ಚಾಗುತ್ತದೆ.

ಅಗತ್ಯ ದಾಖಲೆಗಳು

ಅರ್ಜಿ ಹಾಕೋಾಗ ಬೇಕಾಗುವ ದಾಖಲೆಗಳು:

  • SSLC ಮಾರ್ಕ್ಸ್ ಕಾರ್ಡ್
  • PUC / ITI / ಡಿಪ್ಲೋಮಾ ಸರ್ಟಿಫಿಕೆಟ್
  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್ (ಡ್ರೈವರ್ ಹುದ್ದೆಗೆ)
  • ಫೋಟೋ
  • ಸಹಿ

ಎಲ್ಲಾ ದಾಖಲೆಗಳನ್ನು ಮುಂಚಿತವಾಗಿ ರೆಡಿ ಇಟ್ಟುಕೊಳ್ಳಿ.

ಕೊನೆಯ ಸಲಹೆ

ಈ ಅವಕಾಶವನ್ನು ಕೈಚೆಲ್ಲಬೇಡಿ.
ಇವಾಗಲೇ ತಯಾರಿ ಪ್ರಾರಂಭಿಸಿದ್ರೆ ನಿಮ್ಮ ಗುರಿ ಸಾಧಿಸಬಹುದು

ದೈಹಿಕ ಅರ್ಹತೆ

ಪುರುಷ ಅಭ್ಯರ್ಥಿಗಳು

  • ಎತ್ತರ: 170 ಸೆಂ.ಮೀ
  • ಚೆಸ್ಟ್: 80-85 ಸೆಂ.ಮೀ

ಮಹಿಳಾ ಅಭ್ಯರ್ಥಿಗಳು

  • ಎತ್ತರ: 155 ಸೆಂ.ಮೀ

ಹುದ್ದೆ ಮತ್ತು ವರ್ಗದ ಮೇಲೆ ಅವಲಂಬಿಸಿ ಈ ಮಾನದಂಡಗಳಲ್ಲಿ ವ್ಯತ್ಯಾಸ ಇರಬಹುದು.

ಯಾರು ಅರ್ಜಿ ಹಾಕಬಹುದು?

ಕರ್ನಾಟಕ ಸೇರಿದಂತೆ ಭಾರತದೆಲ್ಲಾ ರಾಜ್ಯಗಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲಾಗಿದೆ. ಅರ್ಹತೆ ಇರುವ ಎಲ್ಲರೂ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕೇಂದ್ರ ಸರ್ಕಾರದ ಈ ನೇಮಕಾತಿಯಲ್ಲಿ ದೇಶದ ಎಲ್ಲ ಭಾಗದ ಜನರು ಭಾಗವಹಿಸಬಹುದು. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಸಮಯಕ್ಕೆ ಅರ್ಜಿ ಹಾಕುವುದು ಮುಖ್ಯ

ಪ್ರಮುಖ ಸೂಚನೆಗಳು

  • ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.
  • ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಹಾಕಬೇಕು.
  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅಪ್ಲೈ ಮಾಡುವುದು ಉತ್ತಮ

ಮುಖ್ಯ ಸಲಹೆ

ಅರ್ಧ ಮಾಹಿತಿಯಿಂದ ಅರ್ಜಿ ಹಾಕಬೇಡಿ, ಸಂಪೂರ್ಣ ನೋಟಿಫಿಕೇಶನ್ ಓದಿ.
ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅದನ್ನು ನಂಬಬೇಡಿ.

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ಆದ್ದರಿಂದ ಜಾಗರೂಕತೆಯಿಂದ ನಿರ್ಧಾರ ಮಾಡಿ.

ಕೊನೆಯ ಮಾತು

ಈ SSB Recruitment 2026 ಒಂದು ದೊಡ್ಡ ಅವಕಾಶವಾಗಿದೆ, ವಿಶೇಷವಾಗಿ SSLC, PUC, ITI, Diploma ಓದಿದವರಿಗೆ.
ಒಟ್ಟು 1000ಕ್ಕೂ ಹೆಚ್ಚು ಹುದ್ದೆಗಳು ಇರುವುದರಿಂದ ಸ್ಪರ್ಧೆ ಜಾಸ್ತಿ ಇರಬಹುದು, ಆದ್ದರಿಂದ ಈಗಲೇ ತಯಾರಿ ಪ್ರಾರಂಭಿಸಿ.

ಸರಿಯಾದ ಮಾಹಿತಿ, ಸಮಯಕ್ಕೆ ಅರ್ಜಿ ಮತ್ತು ಶ್ರಮ ಇವು ನಿಮ್ಮನ್ನು ಸರ್ಕಾರಿ ಉದ್ಯೋಗದ ಕಡೆಗೆ ಕೊಂಡೊಯ್ಯುತ್ತವೆ.

ಆಸಕ್ತಿಯಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಅಫೀಷಿಯಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು : https://ssb.gov.in/