CRPF Constable Recruitment 2026 | CRPF ನೇಮಕಾತಿ 2026 ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರದ ಅಧೀನದಲ್ಲಿರುವ CRPF ನಲ್ಲಿ ಕಾನ್ಸ್ಟೇಬಲ್ ಹಾಗೂ ಟ್ರೇಡ್ಸ್ಮ್ಯಾನ್ ಹುದ್ದೆಗಳಿಗಾಗಿ ದೊಡ್ಡ ಮಟ್ಟದ ನೇಮಕಾತಿ ಪ್ರಕಟಿಸಲಾಗಿದೆ. ಒಟ್ಟು 9195 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಮತ್ತು ಇದು SSLC ಪಾಸ್ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲಾಗಿದೆ. ಡಿಗ್ರಿ ಅಥವಾ ಪಿಯುಸಿ ಅಗತ್ಯವಿಲ್ಲ, ಕೇವಲ SSLC ಪಾಸ್ ಸಾಕು ಎಂಬುದು ಈ ನೇಮಕಾತಿಯ ಮುಖ್ಯ ಆಕರ್ಷಣೆ.
ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ಮ್ಯಾನ್ ವಿಭಾಗದಲ್ಲಿ ವಿವಿಧ ಹುದ್ದೆಗಳು ಲಭ್ಯವಿವೆ. ಒಂದೇ ಹುದ್ದೆ ಅಲ್ಲದೆ ಹಲವು ಪ್ರಕಾರಗಳಲ್ಲಿ ಅವಕಾಶ ನೀಡಲಾಗಿದೆ.
ಮುಖ್ಯವಾಗಿ ಲಭ್ಯವಿರುವ ಹುದ್ದೆಗಳು:
- ಡ್ರೈವರ್
- ಬಾರ್ಬರ್
- ಕುಕ್
- ವಾಷರ್ಮನ್
- ಟೈಲರ್
- ಎಲೆಕ್ಟ್ರಿಷಿಯನ್
- ಮೆಕ್ಯಾನಿಕ್
- ಪೈಪ್ ಬ್ಯಾಂಡ್
- ಸಫಾಯಿ ಕರ್ಮಚಾರಿ
- ವಾಟರ್ ಕ್ಯಾರಿಯರ್
ಅಭ್ಯರ್ಥಿಗಳು ತಮ್ಮ ಆಸಕ್ತಿ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ಹುದ್ದೆಯನ್ನು ಆಯ್ಕೆ ಮಾಡಬಹುದು
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ
ಈ ನೇಮಕಾತಿ ಆಲ್ ಇಂಡಿಯಾ ಮಟ್ಟದಲ್ಲಿ ನಡೆಯುತ್ತಿದ್ರೂ, ಕರ್ನಾಟಕ ರಾಜ್ಯದಲ್ಲೂ ಹುದ್ದೆಗಳು ನೀಡಲಾಗಿದೆ.
ಕರ್ನಾಟಕದಲ್ಲಿ ಸುಮಾರು 471 ಹುದ್ದೆಗಳು ಲಭ್ಯವಿವೆ
ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಬೇರೆ ಬೇರೆ ಹುದ್ದೆಗಳ ಹಂಚಿಕೆ ಮಾಡಲಾಗಿದೆ.
ಅರ್ಜಿ ದಿನಾಂಕಗಳು
- ಅಧಿಸೂಚನೆ ಬಿಡುಗಡೆ: 8 ಏಪ್ರಿಲ್ 2026
- ಅರ್ಜಿ ಆರಂಭ ದಿನಾಂಕ: 20 ಏಪ್ರಿಲ್ 2026
- ಕೊನೆಯ ದಿನಾಂಕ: 19 ಮೇ 2026
ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಅರ್ಹತೆ (Qualification)
ಈ ನೇಮಕಾತಿಯ ಮುಖ್ಯ ಅಂಶ ಎಂದರೆ ಸರಳ ಅರ್ಹತೆ:
- SSLC (10ನೇ ತರಗತಿ) ಪಾಸ್ ಆಗಿರಬೇಕು
- ಹೆಚ್ಚಿನ ವಿದ್ಯಾರ್ಹತೆ ಅಗತ್ಯವಿಲ್ಲ
ಇದು ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೆ ಉತ್ತಮ ಸರ್ಕಾರಿ ಉದ್ಯೋಗದ ಅವಕಾಶ
ವಯೋಮಿತಿ (Age Limit)
- ಕನಿಷ್ಠ ವಯಸ್ಸು: 18 ವರ್ಷ
- ಡ್ರೈವರ್ ಹುದ್ದೆಗೆ: 21 ರಿಂದ 27 ವರ್ಷ
- ಇತರೆ ಹುದ್ದೆಗಳಿಗೆ: 18 ರಿಂದ 23 ವರ್ಷ
ಜನನ ವರ್ಷದ ಆಧಾರ:
- ಡ್ರೈವರ್: 1999 ರಿಂದ 2005 ನಡುವೆ
- ಇತರೆ ಹುದ್ದೆಗಳು: 2003 ರಿಂದ 2008 ನಡುವೆ
SC/ST/OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ
ವೇತನ (Salary)
ಈ ಹುದ್ದೆಗಳಿಗೆ ಉತ್ತಮ ವೇತನ ನೀಡಲಾಗುತ್ತದೆ:
- ₹21,700 ರಿಂದ ₹69,100 ಪ್ರತಿಮಾಸ ವೇತನ
- ವರ್ಷಕ್ಕೊಮ್ಮೆ ವೇತನ ಹೆಚ್ಚಳದ ಅವಕಾಶ
ಇದು ಕೇಂದ್ರ ಸರ್ಕಾರದ ಉದ್ಯೋಗವಾಗಿರುವುದರಿಂದ, ಭದ್ರತೆ ಮತ್ತು ಸೌಲಭ್ಯಗಳು ಉತ್ತಮವಾಗಿರುತ್ತವೆ
ಅರ್ಜಿ ಶುಲ್ಕ
- ಸಾಮಾನ್ಯ/OBC ಅಭ್ಯರ್ಥಿಗಳಿಗೆ: ₹100
- SC/ST ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಯಾವುದೇ ತಪ್ಪು ಮಾಹಿತಿಯನ್ನು ನಂಬಬೇಡಿ, ಅಧಿಕೃತ ಶುಲ್ಕ ₹100 ಮಾತ್ರ
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಹಲವು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
- ದೈಹಿಕ ದಕ್ಷತಾ ಪರೀಕ್ಷೆ
- ದೈಹಿಕ ಮಾನದಂಡ ಪರೀಕ್ಷೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಎಲ್ಲ ಹಂತಗಳನ್ನು ಪಾಸ್ ಮಾಡಿದವರು ಮಾತ್ರ ಅಂತಿಮ ಆಯ್ಕೆಗೆ ಒಳಗಾಗುತ್ತಾರೆ
ಪರೀಕ್ಷೆಗೆ ತಯಾರಿ ಹೇಗೆ ಮಾಡಬೇಕು
ಈ ನೇಮಕಾತಿಯಲ್ಲಿ ಆಯ್ಕೆ ಆಗಬೇಕೆಂದರೆ ಸರಿಯಾದ ತಯಾರಿ ತುಂಬಾ ಮುಖ್ಯ. ಬಹುತೇಕ ಅಭ್ಯರ್ಥಿಗಳು ಫಿಸಿಕಲ್ ಟೆಸ್ಟ್ ಅನ್ನು ಲೈಟ್ ತೆಗೆದುಕೊಳ್ಳುತ್ತಾರೆ, ಆದರೆ ಅದು ಮೊದಲ ಹಂತವಾಗಿರುವುದರಿಂದ ಅದರಲ್ಲಿ ಫೇಲ್ ಆದ್ರೆ ಮುಂದಿನ ಹಂತಗಳಿಗೆ ಅವಕಾಶ ಸಿಗೋದಿಲ್ಲ.
ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷ ಓಟ (running) ಪ್ರಾಕ್ಟೀಸ್ ಮಾಡುವುದು ಅತ್ಯಗತ್ಯ. ಆರಂಭದಲ್ಲಿ ನಿಧಾನವಾಗಿ ಪ್ರಾರಂಭಿಸಿ, ನಂತರ ನಿಮ್ಮ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಇದು ನಿಮ್ಮ ಸ್ಟಾಮಿನಾ ಹೆಚ್ಚಿಸಲು ಸಹಾಯ ಮಾಡುತ್ತದೆ.
ಲಿಖಿತ ಪರೀಕ್ಷೆಗೆ ತಯಾರಿ ಮಾಡುವಾಗ ಈ ವಿಷಯಗಳಿಗೆ ಹೆಚ್ಚು ಗಮನ ಕೊಡಿ:
- ಸಾಮಾನ್ಯ ಜ್ಞಾನ (General Knowledge)
- ಗಣಿತದ ಮೂಲಭೂತ ಪ್ರಶ್ನೆಗಳು
- ಲಾಜಿಕ್ ಮತ್ತು ರೀಸನಿಂಗ್
- ಪ್ರಸ್ತುತ ಘಟನೆಗಳು (Current Affairs)
ಪ್ರತಿದಿನ ಕನಿಷ್ಠ 2 ಗಂಟೆ ಓದಿಗೆ ಮೀಸಲಿಡಬೇಕು. ಓದಿದ ವಿಷಯಗಳನ್ನು ಪುನರಾವರ್ತನೆ ಮಾಡುವುದು ತುಂಬಾ ಮುಖ್ಯ.
ಅಗತ್ಯ ದಾಖಲೆಗಳು (Documents Required)
ಅರ್ಜಿ ಸಲ್ಲಿಸುವಾಗ ಮತ್ತು ಡಾಕ್ಯುಮೆಂಟ್ ಪರಿಶೀಲನೆ ವೇಳೆ ಈ ದಾಖಲೆಗಳು ಬೇಕಾಗುತ್ತವೆ:
- SSLC ಅಂಕಪಟ್ಟಿ
- ಜನನ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
ಎಲ್ಲ ದಾಖಲೆಗಳು ಸರಿಯಾಗಿರಬೇಕು, ಇಲ್ಲವಾದರೆ ಅರ್ಜಿ ತಿರಸ್ಕಾರವಾಗಬಹುದು.
ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
- ಅಧಿಕೃತ ವೆಬ್ಸೈಟ್ನಲ್ಲೇ ಮಾತ್ರ ಅರ್ಜಿ ಹಾಕಿ
- ಫೇಕ್ ಮಾಹಿತಿ ಅಥವಾ ತಪ್ಪು ಮಾರ್ಗದರ್ಶನದಿಂದ ದೂರ ಇರಿ
- ಫಿಸಿಕಲ್ ಟೆಸ್ಟ್ಗೆ ಈಗಿನಿಂದಲೇ ತಯಾರಿ ಪ್ರಾರಂಭಿಸಿ
- ಪರೀಕ್ಷೆಗೆ ಮುಂಚೆ ಮಾಕ್ ಟೆಸ್ಟ್ಗಳನ್ನು practice ಮಾಡಿ
ಈ ನೇಮಕಾತಿ ನಿಮ್ಮ ಭವಿಷ್ಯ ಬದಲಾಯಿಸುವ ಅವಕಾಶ ಆಗಬಹುದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.
ದೈಹಿಕ ಪರೀಕ್ಷೆ ವಿವರ
ಪುರುಷ ಅಭ್ಯರ್ಥಿಗಳಿಗೆ:
- 5 ಕಿಮೀ ಓಟ – 24 ನಿಮಿಷದಲ್ಲಿ ಪೂರ್ಣಗೊಳಿಸಬೇಕು
ಮಹಿಳಾ ಅಭ್ಯರ್ಥಿಗಳಿಗೆ:
- 1.6 ಕಿಮೀ ಓಟ – 8.30 ನಿಮಿಷದಲ್ಲಿ ಪೂರ್ಣಗೊಳಿಸಬೇಕು
ಇತರೆ ಕೆಲವು ಹುದ್ದೆಗಳಿಗೆ:
- ಪುರುಷರಿಗೆ 1.6 ಕಿಮೀ – 10 ನಿಮಿಷ
- ಮಹಿಳೆಗೆ 1.6 ಕಿಮೀ – 12 ನಿಮಿಷ
ಈ ಪರೀಕ್ಷೆಗಳು ತುಂಬಾ ಸುಲಭವಾಗಿದ್ದು, ಈಗಿನಿಂದಲೇ ಅಭ್ಯಾಸ ಮಾಡಿದರೆ ಸುಲಭವಾಗಿ ಪಾಸ್ ಆಗಬಹುದು
ದೈಹಿಕ ಮಾನದಂಡ (Physical Standards)
ಪುರುಷರಿಗೆ:
- ಎತ್ತರ: 170 ಸೆಂ.ಮೀ
- ಚೆಸ್ಟ್: 80-85 ಸೆಂ.ಮೀ
ಮಹಿಳೆಗೆ:
- ಎತ್ತರ: 157 ಸೆಂ.ಮೀ
SC/ST ಅಭ್ಯರ್ಥಿಗಳಿಗೆ:
- ಪುರುಷ: 162.5 ಸೆಂ.ಮೀ
- ಮಹಿಳೆ: 150 ಸೆಂ.ಮೀ
ಇಲ್ಲಿ ವರ್ಗದ ಆಧಾರದ ಮೇಲೆ ಸಡಿಲಿಕೆ ನೀಡಲಾಗಿದೆ
ಪರೀಕ್ಷೆ ವಿವರ
- ಪರೀಕ್ಷೆ ಕಂಪ್ಯೂಟರ್ ಮೂಲಕ ನಡೆಯುತ್ತದೆ
- ಒಟ್ಟು 100 ಅಂಕಗಳು
- 25 ಪ್ರಶ್ನೆಗಳು – ಸಾಮಾನ್ಯ ಜ್ಞಾನ
ನೆಗೆಟಿವ್ ಮಾರ್ಕಿಂಗ್:
- 0.25 ಅಂಕ ಕಡಿತ
ಸರಿಯಾದ ಉತ್ತರಗಳಿಗೆ ಮಾತ್ರ ಟಿಕ್ ಮಾಡಿ, ತಪ್ಪು ಉತ್ತರಗಳು ಅಂಕ ಕಡಿತ ಮಾಡುತ್ತವೆ
ಪರೀಕ್ಷಾ ಕೇಂದ್ರ
ಕರ್ನಾಟಕ ಅಭ್ಯರ್ಥಿಗಳಿಗೆ ಪ್ರಮುಖ ಕೇಂದ್ರ:
- ಬೆಂಗಳೂರು – ಯಲಹಂಕ (CRPF ಸೆಂಟರ್)
ಎಲ್ಲ ಪರೀಕ್ಷೆಗಳು ಇದೇ ಕೇಂದ್ರದಲ್ಲಿ ನಡೆಯುವ ಸಾಧ್ಯತೆ ಇದೆ
ಮುಖ್ಯ ಸೂಚನೆಗಳು
- ಅರ್ಜಿ ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾತ್ರ
- ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು
- ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು
ಕೊನೆಯ ಮಾತು
CRPF ಕಾನ್ಸ್ಟೇಬಲ್ ಮತ್ತು ಟ್ರೇಡ್ಸ್ಮ್ಯಾನ್ ನೇಮಕಾತಿ 2026 ಒಂದು ದೊಡ್ಡ ಅವಕಾಶವಾಗಿದೆ. SSLC ಪಾಸ್ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಸಿಗುವ ಅಪರೂಪದ ಅವಕಾಶ ಇದು
ಮಹಿಳೆಯರು ಹಾಗೂ ಪುರುಷರು ಇಬ್ಬರೂ ಅರ್ಜಿ ಸಲ್ಲಿಸಬಹುದು. ಕಡಿಮೆ ಸ್ಪರ್ಧೆಯಲ್ಲಿ ಉತ್ತಮ ಉದ್ಯೋಗ ಪಡೆಯಲು ಇದು ಸೂಕ್ತ ಸಮಯ.
ಕೊನೆಯ ದಿನಾಂಕದೊಳಗೆ ಅರ್ಜಿ ಹಾಕಿ ನಿಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಿ.
ಆಸಕ್ತಿಯಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಅಫೀಷಿಯಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು :
| APPLY LINK |